ಮಹೀಂದ್ರಾದ ಕೃಷಿ ಸಲಕರಣೆಗಳ ವಿಭಾಗವು ಜೂನ್ 2021 ರಲ್ಲಿ 46875 ಘಟಕಗಳನ್ನು ಮಾರಾಟ ಮಾಡಿದೆ

Jul 10, 2023 |

ಭತ್ತದ ಕೃಷಿಯು ಭಾರತದ ಅತ್ಯಂತ ಪ್ರಚಲಿತ ಕೃಷಿ ವಿಧಾನಗಳಲ್ಲಿ ಒಂದಾಗಿದೆ. ಭತ್ತವನ್ನು ಬೆಳೆಯಲು ದೇಶವು ಸಣ್ಣ, ಪ್ರವಾಹ ಪೀಡಿತ ಹೊಲಗಳನ್ನು ಬಳಸುತ್ತದೆ. ಮಣ್ಣು ಸಡಿಲವಾಗಿ, ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿರುವ ಈ ವಿಧಾನದ ಸ್ವರೂಪವನ್ನು ಗಮನಿಸಿದರೆ, ನೀವು ಸೂಕ್ತ ರೀತಿಯ ಟ್ರ್ಯಾಕ್ಟರ್ ಬಳಸಬೇಕಾಗುತ್ತದೆ.

ನಿಮ್ಮ ಭತ್ತದ ಗದ್ದೆಗೆ ಟ್ರ್ಯಾಕ್ಟರ್ ಅನ್ನು ಆಯ್ಕೆಮಾಡುವಾಗ, ಅದು ನಿಮಗೆ ಸೂಕ್ತವಾಗಿದೆ ಮತ್ತು ಶ್ರಮವಿಲ್ಲದಂತೆ ನಿಮ್ಮೆಲ್ಲ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ, ಭತ್ತದ ಗದ್ದೆಗಳಿಗಾಗಿ ಭಾರತದಲ್ಲಿ ಅತ್ಯುತ್ತಮ ಟ್ರ್ಯಾಕ್ಟರ್ ಅನ್ನು ಆಯ್ಕೆ ಮಾಡುವ ಸಣ್ಣ ಮಾರ್ಗದರ್ಶಿ ಇಲ್ಲಿದೆ.

ಸರಿಯಾದ ಟ್ರ್ಯಾಕ್ಟರ್ ಆಯ್ಕೆಮಾಡುವುದು

ಭತ್ತದ ಕೃಷಿಗಾಗಿ ಟ್ರ್ಯಾಕ್ಟರ್ ಆಯ್ಕೆಮಾಡುವಾಗ, ನೀವು ಅದರ ವೈಶಿಷ್ಟ್ಯಗಳನ್ನು ವಿವರವಾಗಿ ತಿಳಿದುಕೊಳ್ಳಬೇಕು. ಉದಾಹರಣೆಗೆ, ನಿಮಗೆ ಎಷ್ಟು ಅಶ್ವಶಕ್ತಿಯ ಟ್ರ್ಯಾಕ್ಟರ್ ಅಗತ್ಯವಿರುತ್ತದೆ ಎಂಬುದನ್ನು ನೀವು ಲೆಕ್ಕಾಚಾರ ಮಾಡಬೇಕಾಗುತ್ತದೆ. ಸಾಮಾನ್ಯ ಭತ್ತದ ಗದ್ದೆಗಳಲ್ಲಿ ಕಾರ್ಯಾಚರಣೆ ನಡೆಸಲು ನೀವು ಕಡಿಮೆ ಅಶ್ವಶಕ್ತಿಯ ಟ್ರ್ಯಾಕ್ಟರ್ ಬಳಸಬಹುದು, ಆದರೆ ಎಳೆಯುವಿಕೆ, ಸಾಗಣೆಯಂತಹ ಹೆಚ್ಚು ಶ್ರಮದಾಯಕ ಕೆಲಸಗಳಿಗಾಗಿ, ನೀವು 30 HP ವರೆಗಿನ ಟ್ರ್ಯಾಕ್ಟರ್ ಆಯ್ಕೆ ಮಾಡಬಹುದು.

ಮುಂದೆ, ನೀವು 2WD ಮತ್ತು 4WD ಪೈಕಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ. 2WD ಟ್ರ್ಯಾಕ್ಟರ್ ಸಾಮಾನ್ಯ ಭತ್ತದ ನಾಟಿ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. 2WD ಟ್ರ್ಯಾಕ್ಟರ್ ಭತ್ತದ ನಾಟಿಗೆ ಅತ್ಯುತ್ತಮವಾಗಿದೆ. ಏಕೆಂದರೆ, ಕೆಸರು ಮತ್ತು ನೀರಿನ ಹೊರತಾಗಿಯೂ ಮುಂಭಾಗದ ಚಕ್ರದ ಅಕ್ಷವು ಟ್ರ್ಯಾಕ್ಟರ್ ಮಣ್ಣಿನಲ್ಲಿ ಮುಳುಗಲು ಬಿಡುವುದಿಲ್ಲ. ಹಾಗೆಯೇ, ಅದನ್ನು ನಿರ್ವಹಿಸುವುದು ಸುಲಭ. ಭತ್ತದ ನಾಟಿ ಮಾಡುವ 4WD ಟ್ರ್ಯಾಕ್ಟರ್ ಹೆಚ್ಚು ವಿಸ್ತಾರವಾದ ಭತ್ತದ ಗದ್ದೆಗಳು, ಸಡಿಲವಾದ ಮಣ್ಣು ಅಥವಾ ಭಾರೀ ಉಪಕರಣಗಳಿಗೆ ಸೂಕ್ತವಾಗಿದೆ. ಇದಲ್ಲದೆ, ಮಹೀಂದ್ರಾ ಟ್ರ್ಯಾಕ್ಟರ್ ಆಯ್ಕೆ ಮಾಡಿಕೊಂಡರೆ, ನೀವು ಅದರ ಇತರ ವೈಶಿಷ್ಟ್ಯಗಳನ್ನೂ ಆನಂದಿಸಬಹುದು. ಪ್ರಾಥಮಿಕವಾಗಿ, ಮಹೀಂದ್ರಾ ಟ್ರ್ಯಾಕ್ಟರ್ಗಳು ತಮ್ಮ ವರ್ಗದಲ್ಲೇ ಪ್ರಮುಖವಾದ ಹೈಡ್ರಾಲಿಕ್ಗಳನ್ನು ಹೊಂದಿವೆ, ಇದು ಭಾರೀ ಗಾತ್ರದ ಉಪಕರಣಗಳನ್ನು ಎಳೆಯಲು ಮತ್ತು ಹೆಚ್ಚಿನ ನೀರನ್ನು ಎತ್ತಲು ನಿಮಗೆ ಅನುಕೂಲ ಕಲ್ಪಿಸುತ್ತವೆ. ಅಲ್ಲದೆ, ಪವರ್ ಸ್ಟೀರಿಂಗ್, ಡ್ಯುಯಲ್-ಕ್ಲಚ್ ಜೊತೆಗೆ ಸ್ಥಿರವಾದ ಮೆಶ್ ಪ್ರಸರಣ, ಹೊಂದಾಣಿಕೆ ಮಾಡಬಹುದಾದ ಆಸನಗಳು, ಸುಲಭವಾಗಿ ತಲುಪಬಹುದಾದ ನಿಯಂತ್ರಣಗಳು ಮತ್ತು LCD ಕ್ಲಸ್ಟರ್ಗಳನ್ನು ನೀವು ಆಯ್ಕೆ ಮಾಡಬಹುದು.

ಮಹೀಂದ್ರಾ ಟ್ರ್ಯಾಕ್ಟರ್ ಏಕೆ ಖರೀದಿಸಬೇಕು?

ಕಾರಣವು ತುಂಬ ಸರಳವಾಗಿದೆ - ಮೇಲ್ಗಡೆ ಪಟ್ಟಿ ಮಾಡಲಾದ ಭತ್ತದ ಬೇಸಾಯಕ್ಕೆ ನಿರ್ಣಾಯಕವಾಗಿರುವ ಎಲ್ಲ ಅಗತ್ಯ ವೈಶಿಷ್ಟ್ಯಗಳನ್ನು ಮಹೀಂದ್ರಾ ಶ್ರೇಣಿಯ ಟ್ರ್ಯಾಕ್ಟರ್ಗಳಲ್ಲಿ ನೀಡಲಾಗುತ್ತದೆ. ಮಹೀಂದ್ರಾ ಜಿವೋ ಶ್ರೇಣಿಯ ಟ್ರ್ಯಾಕ್ಟರ್ಗಳು ಭತ್ತದ ಬೇಸಾಯಕ್ಕಾಗಿ ಹೆಚ್ಚು ಮಾರಾಟವಾಗುವ ಟ್ರ್ಯಾಕ್ಟರ್ಗಳಾಗಿವೆ. ಅವುಗಳನ್ನು ಕೆಳಗೆ ವಿವರವಾಗಿ ಅನ್ವೇಷಿಸೋಣ:

ಮಹೀಂದ್ರಾ ಜಿವೋ 305 DI 4WD ಟ್ರ್ಯಾಕ್ಟರ್ DI ಎಂಜಿನ್ ಹೊಂದಿರುವ 18.2 kW (24.5 HP) ಸಾಮರ್ಥ್ಯದ ಏಕೈಕ 4WD ಟ್ರ್ಯಾಕ್ಟರ್ ಆಗಿದೆ. ಸಾಟಿಯಿಲ್ಲದ ಕಾರ್ಯಕ್ಷಮತೆಯೊಂದಿಗೆ ಅನೇಕ ಸಲಕರಣೆಗಳನ್ನು ಉಪಯೋಗಿಸುವ ಸ್ವಾತಂತ್ರ್ಯವನ್ನು ಇದು ನಿಮಗೆ ನೀಡುತ್ತದೆ. ಗರಿಷ್ಠ 89 Nm ಟಾರ್ಕ್ ಮತ್ತು 18.2 kW (24.5 HP) ಗರಿಷ್ಠ PTO ಶಕ್ತಿ ಹೊಂದಿರುವ ಇದು ಭತ್ತದ ಬೇಸಾಯಕ್ಕೆ ಸೂಕ್ತವಾದ ಟ್ರ್ಯಾಕ್ಟರ್ ಆಗಿದೆ ಮತ್ತು ಸಣ್ಣ ಹೊಲಗಳಲ್ಲಿಯೂ ಸುಲಭವಾಗಿ ಕುಶಲತೆಯಿಂದ ನಿರ್ವಹಿಸಬಹುದು.

ಇದಕ್ಕೆ ಹೋಲಿಸಿದರೆ, ಮಹೀಂದ್ರಾ ಜಿವೊ 365 DI 4WD ಟ್ರ್ಯಾಕ್ಟರ್ ಗರಿಷ್ಠ 118 Nm ಟಾರ್ಕ್ ಮತ್ತು ಗರಿಷ್ಠ 22.4 kW (30 HP) PTO ಪವರ್ ಹಾಗೂ 26.8 kW (36 HP) ಎಂಜಿನ್ ಪವರ್ ನೀಡುತ್ತದೆ. ಭತ್ತದ ಗದ್ದೆಗಳಲ್ಲಿ ಬಳಸಲು ಈ ವರ್ಗದಲ್ಲೇ ಅತ್ಯುತ್ತಮವೆನಿಸಿದ ಮೈಲೇಜ್ ನೀಡುವ ಈ ಟ್ರ್ಯಾಕ್ಟರ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕ್ರಾಂತಿಕಾರಿ ಪೊಜಿಷನ್-ಆಟೋ ಕಂಟ್ರೋಲ್ (PAC) ತಂತ್ರಜ್ಞಾನವನ್ನು ಹೊಂದಿರುವ ಪ್ರಥಮ ಟ್ರ್ಯಾಕ್ಟರ್ ಇದಾಗಿದ್ದು, ಕೆಸರಿನಲ್ಲಿ ಕೆಲಸ ಮಾಡುವಲ್ಲಿ ಮಾಸ್ಟರ್ ಆಗಿದೆ. ಇದರರ್ಥ ನಿಮ್ಮ ಭತ್ತದ ಹೊಸದಲ್ಲಿ ಕೆಲಸ ಮಾಡುವ ಸಮಯದಲ್ಲಿ ನಿಮ್ಮ PC ಲಿವರ್ ಅನ್ನು ನೀವು ಪದೇ ಪದೇ ಸರಿಹೊಂದಿಸಬೇಕಾಗಿಲ್ಲ. ಈ ಟ್ರ್ಯಾಕ್ಟರ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುವಾಗ ನಿಮ್ಮ ಕೆಲಸವನ್ನು ಸುಲಭವಾಗಿ ಮುಗಿಸಬಹುದು.

ಮತ್ತು ಹೆಚ್ಚು ಸುಧಾರಿತ ಮತ್ತು ಹೈಟೆಕ್ ಟ್ರ್ಯಾಕ್ಟರ್ ಅನ್ನು ನೀವು ಬಯಸಿದರೆ, ನೀವು ಮಹೀಂದ್ರಾ ಜಿವೊ 245 DI ಶ್ರೇಣಿಯನ್ನು ಆಯ್ಕೆ ಮಾಡಬಹುದು. ಜಿವೊ 245 DI ಶ್ರೇಣಿಯು ಶಕ್ತಿಯುತ ELS DI ಎಂಜಿನ್ ಹೊಂದಿದ್ದು, 14.9 kW (20 HP) ನಿಂದ 26.84 kW (36 HP) ಶಕ್ತಿಯನ್ನು ಮತ್ತು 73 Nm ನಿಂದ 118 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಶಕ್ತಿಯನ್ನು 8F +4R ಸಂಯೋಜನೆಯಲ್ಲಿ ಸ್ಥಿರವಾದ ಮೆಶ್ ಗೇರ್ಬಾಕ್ಸ್ನೊಂದಿಗೆ ಚಕ್ರಗಳಿಗೆ (2WD ಅಥವಾ 4WD) ವರ್ಗಾಯಿಸಲಾಗುತ್ತದೆ. ಜಿವೊ 245 ಟ್ರ್ಯಾಕ್ಟರ್ಗಳು ಸ್ವಯಂಚಾಲಿತ ಡ್ರಾಫ್ಟ್ ಮತ್ತು ಡೆಪ್ತ್ ಮ್ಯಾನೇಜ್ಮೆಂಟ್ ಹೈಡ್ರಾಲಿಕ್ ಸಿಸ್ಟಂಗಳೊಂದಿಗೆ ಬರುತ್ತವೆ. ಇದು ಮಣ್ಣಿನೊಳಗೆ ಬಳಸುವ ಉಕರಣಗಳು ಏಕರೂಪದ ಆಳವನ್ನು ತಲುಪುವುದನ್ನು ಖಚಿತಪಡಿಸುತ್ತದೆ. ಹೈಡ್ರಾಲಿಕ್ಸ್ ವ್ಯವಸ್ಥೆಯು 750 ಕೆಜಿ ವರೆಗೆ ಲಿಫ್ಟ್ ಸಾಮರ್ಥ್ಯ ಮತ್ತು 3000 ಕೆಜಿ ಎಳೆಯುವ ಶಕ್ತಿಯನ್ನು ಹೊಂದಿದ್ದು, ಇದು ಮಹೀಂದ್ರಾ ಟ್ರ್ಯಾಕ್ಟರ್ಗಳನ್ನು ಭತ್ತದ ನಾಟಿ, ಉಳುಮೆ ಮತ್ತು ಎಳೆಯುವಿಕೆಗೆ ಸೂಕ್ತವಾಗಿ ಮಾಡಿವೆ.

ಕೊನೆಯದಾಗಿ, ಆರಾಮದ ವಿಷಯಕ್ಕೆ ಬಂದಾಗ ಟ್ರ್ಯಾಕ್ಟರ್ಗಳ ಜಿವೊ ಶ್ರೇಣಿ ಯಾವುದರಲ್ಲೂ ಕಡಿಮೆಯಿಲ್ಲ. ಹೊಂದಾಣಿಕೆ ಮಾಡಬಹುದಾದ ಆಸನಗಳು, ಸುಲಭವಾಗಿ ತಲುಪಬಹುದಾದ ನಿಯಂತ್ರಣಗಳು, ಡ್ಯುಯಲ್-ಕ್ಲಚ್, ಪವರ್ ಸ್ಟೀರಿಂಗ್ — ನೀವು ಸುಗಮವಾದ ಮತ್ತು ಸುಲಭವಾದ ಕೃಷಿ ವಾತಾವರಣವನ್ನು ಹೊಂದುವುದನ್ನು ಖಚಿತಪಡಿಸಲು ಅಗತ್ಯವಿರುವ ಎಲ್ಲವನ್ನೂ ಇದು ಹೊಂದಿದೆ.

ಸರಿಯಾದ ಉಪಕರಣಗಳನ್ನು ಆಯ್ಕೆ ಮಾಡುವುದು

ಟ್ರ್ಯಾಕ್ಟರ್ನ ಹೊರತಾಗಿ, ಭತ್ತದ ಬೇಸಾಯಕ್ಕೆ ಸೂಕ್ತವಾದ ಉಪಕರಣಗಳನ್ನು ಹೊಂದಿರುವುದೂ ಅತ್ಯಗತ್ಯ. ಇಲ್ಲಿ, ಮಹೀಂದ್ರಾ ಹಾರ್ವೆಸ್ಟ್ಮಾಸ್ಟರ್ (Harvestmaster) H12 4WD ನಿಮ್ಮ ಅತ್ಯುತ್ತಮ ಆಯ್ಕೆಯಾಗಿದ್ದು, ಇದು ವೇಗದ ವ್ಯಾಪ್ತಿ, ಧಾನ್ಯಗಳ ಕಡಿಮೆ ನಷ್ಟ, ಕಡಿಮೆ ಇಂಧನ ಬಳಕೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮಹೀಂದ್ರಾ ಅರ್ಜುನ್ ನೊವೊ (Mahindra Arjun Novo) ಸರಣಿಯ ಟ್ರ್ಯಾಕ್ಟರ್ಗಳಿಗೆ ಪೂರಕವಾಗಿ ಮಲ್ಟಿ-ಕ್ರಾಫ್ಟ್ ಟ್ರ್ಯಾಕ್ಟರ್ ಮೌಂಟೆಡ್ ಕಂಬೈನ್ ಹಾರ್ವೆಸ್ಟರ್ ಅನ್ನು ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಇದು 41.56 kW ಮತ್ತು 47.80 kW ನಡುವಿನ ಎಂಜಿನ್ ಶಕ್ತಿ ಮತ್ತು ಅಧಿಕ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ. ಇದು ಒಂದು ಹೊಲದಿಂದ ಇನ್ನೊಂದಕ್ಕೆ ಬದು(ಒಡ್ಡು)ಗಳನ್ನು ಸುಲಭವಾಗಿ ದಾಟುತ್ತದೆ. ಹೆಚ್ಚುವರಿಯಾಗಿ, ಅದರ ಶ್ರೇಷ್ಠತಮ ಕಟ್ಟರ್ ಬಾರ್ ಗೋಚರತೆಯು ಕೊಯ್ಲನ್ನು ಸುಲಭಗೊಳಿಸುತ್ತದೆ ಮತ್ತು ಬಹುಮುಖಿಯಾಗಿ ಬಳಸಬಹುದಾಗಿದೆ.

ಬೆಲೆ ಪುಟಕ್ಕೆ ಭೇಟಿ ನೀಡಿ

ಮಹೀಂದ್ರಾ ನೀಡುವ 35+ ಟ್ರ್ಯಾಕ್ಟರ್ಗಳಲ್ಲಿ ನಿಮಗಾಗಿ ಹೆಚ್ಚು ಸೂಕ್ತವಾದ ಟ್ರ್ಯಾಕ್ಟರ್ ಅನ್ನು ನೀವು ಆರಿಸಿಕೊಳ್ಳಬಹುದು. ನಮ್ಮ ಟ್ರ್ಯಾಕ್ಟರ್ಗಳಲ್ಲಿ, ಆಗಾಗ ಕೆಟ್ಟು ನಿಲ್ಲುವುದು ಮತ್ತು ನಿರ್ವಹಣೆ, ಇಂಧನ ಮಿತವ್ಯಯ ಕಡಿಮೆಯಿರುವುದು, ಶಕ್ತಿಯನ್ನು ಅಸ್ಥಿರವಾಗಿ ವಿತರಿಸುವುದು ಅಥವಾ ಅಸ್ವಸ್ಥತೆಯ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ನಿಮಗೆ ಅತ್ಯುತ್ತಮವಾದುದನ್ನೇ ನಾವು ನೀಡುತ್ತೇವೆ.

ಭತ್ತದ ಬೇಸಾಯವನ್ನು ಸುಲಭಗೊಳಿಸುವುದರಿಂದ ಮತ್ತು ಮಹೀಂದ್ರಾ ಟ್ರ್ಯಾಕ್ಟರ್ಗಳ ಶ್ರೇಣಿಯೊಂದಿಗೆ ಭತ್ತದ ಗದ್ದೆಗಳಲ್ಲಿ ಕಾರ್ಯಾಚರಣೆಯ ವೆಚ್ಚವನ್ನು ತಗ್ಗಿಸುವುದರಿಂದ ನಿಮ್ಮ ಇಳುವರಿಯನ್ನು ಗಮನಾರ್ಹವಾಗಿ ಸುಧಾರಿಸಿಕೊಳ್ಳಿ. ನಮ್ಮ ಟ್ರ್ಯಾಕ್ಟರ್ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬೆಲೆ ಪುಟಕ್ಕೆ ಭೇಟಿ ನೀಡಿ.

Latest Press Release

Mahindra Showcases CBG-powered Tractor technology in New Delhi
Mahindra’s Farm Equipment Sector Sells 25587 Units in India during July 2024
Mahindra’s Farm Equipment Sector Sells 20518 Units in India during August 2024