
ಮಹೀಂದ್ರಾ ಟ್ರ್ಯಾಕ್ಟರ್ಸ್
ಪ್ರತಿ ಹಂತದಲ್ಲೂ ಟಫ್
ಆಗಿರುತ್ತದೆ, ನಿಮ್ಮ ಜೊತೆಗೆ
ಪ್ರತಿ ಹೆಜ್ಜೆಯಲ್ಲಿ
ಸ್ಥೂಲನೋಟ
ಸುಮಾರು 3 ದಶಕಗಳಿಗೂ ಹೆಚ್ಚು ಸಮಯದಿಂದ, ಮಹೀಂದ್ರಾ ಭಾರತದ ವಿವಾದಾತೀತ ನಂ. 1 ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿದೆ ಹಾಗೂ ಪ್ರಮಾಣದಲ್ಲಿ ವಿಶ್ವದ ಅತಿ ದೊಡ್ಡ ಟ್ರ್ಯಾಕ್ಟರ್ ಉತ್ಪಾದಕ ಸಂಸ್ಥೆಯಾಗಿದೆ. $19.4 Billion ಮೌಲ್ಯದ ಮಹೀಂದ್ರಾ ಸಮೂಹದ ಭಾಗವಾಗಿ,ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯು ಕೃಷಿ ವಿಭಾಗದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಮಹೀಂದ್ರಾದ ಕೃಷಿ ಸಲಕರಣೆಗಳ ವಲಯದ (FES) ಪ್ರಮುಖ ಘಟಕವಾಗಿದೆ.
ಸುಮಾರು 40ಕ್ಕೂ ಹೆಚ್ಚು ದೇಶಗಳಲ್ಲಿ ಉಪಸ್ಥಿತಿ ಹೊಂದಿರುವ ಮಹೀಂದ್ರಾ ಸಂಸ್ಥೆಯು ಗುಣಮಟ್ಟದಿಂದಲೇ ಖ್ಯಾತಿವೆತ್ತಿದೆ. ಡೆಮಿಂಗ್ ಅವಾರ್ಡ್ ಮತ್ತು ಜಪಾನ್ನ ಕ್ವಾಲಿಟಿ ಮೆಡಲ್ ಎರಡನ್ನೂ ಪಡೆದಿರುವ ಜಗತ್ತಿನ ಏಕೈಕ ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿದೆ.
ಮಹೀಂದ್ರಾ ಟ್ರಾಕ್ಟರ್ಸ್ -
ದಯಪಾಲಿಸುವ ಏಕೈಕ ಟ್ರಾಕ್ಟರ್ ಬ್ರಾಂಡ್


ಅತ್ಯಾಧುನಿಕ R&D
ನಮ್ಮ ಅತ್ಯಾಧುನಿಕ R&D ಸೌಲಭ್ಯಗಳು ಜಗತ್ತಿನಾದ್ಯಂತ ಎಲ್ಲ ರೈತರಿಗೆ ನಿಖರವಾದ ಮತ್ತು ನವೀನವಾದ ತಂತ್ರಜ್ಞಾನದ ಪರಿಹಾರಗಳನ್ನು ಒದಗಿಸುತ್ತಿವೆ.

ವಿಶ್ವ ದರ್ಜೆಯ ಉತ್ಪಾದನೆ
ಜಗತ್ತಿನ 8 ದೇಶಗಳಲ್ಲಿ ದೃಢವಾದ ಉತ್ಪಾದನಾ ಸೌಲಭ್ಯಗಳೊಂದಿಗೆ, ಪ್ರಮಾಣ ಮತ್ತು ಗುಣಮಟ್ಟದಲ್ಲಿ ಶ್ರೇಷ್ಠತೆಯಮಾನದಂಡವನ್ನು ನಾವು ಪ್ರತಿ ವರ್ಷವೂ ಹೆಚ್ಚಿಸುತ್ತಲೇ ಇದ್ದೇವೆ.

ಸಾಟಿಯಿಲ್ಲದ ಗುಣಮಟ್ಟ
ಮಹೀಂದ್ರಾದ ಮುಂಚೂಣಿಯಲ್ಲಿರುವುದು ಗುಣಮಟ್ಟಕ್ಕೆ ಅದು ನೀಡುತ್ತಿರುವ ಶ್ರದ್ಧೆ. ಜಪಾನ್ ಕ್ವಾಲಿಟಿ ಮೆಡಲ್ ಮತ್ತು ಡೆಮಿಂಗ್ ಅಪ್ಲಿಕೇಶನ್ ಪ್ರೈಸ್ ಎರಡನ್ನೂ ಗೆದ್ದಿರುವ ಜಗತ್ತಿನ ಮೊದಲ ಮತ್ತು ಏಕೈಕ ಟ್ರ್ಯಾಕ್ಟರ್ ತಯಾರಕ ಸಂಸ್ಥೆ ನಾವಾಗಿದ್ದೇವೆ.




